ಚೈನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ಗೆ ಜಯ

Share

ಚೈನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ಗೆ ಜಯ

    by-ಕೆಂಧೂಳಿ

ಮೊಹಾಲಿ,ಏ,೦೮-ಪಂಜಾಬ್ ಕಿಂಗ್ಸ್ ನಿಗಧಿತ ಓವರ್‌ನಲ್ಲಿ ಗಳಿಸಿದ ೨೧೦ ರನ್ನು ಬೆನ್ನಟ್ಟಿದರಾದರೂ ಚೆನೈ ಸೂಪರ್ ಕಿಂಗ್ಸ್ ನ ಆಟಗಾರರು ಹೆಚ್ಚು ಹೊತ್ತು ಫೀಲ್ಡ್‌ನಲ್ಲಿ ನಿಲ್ಲದೆ ಔಟ್ ಆಗುವ ಮೂಲಕ ಆ ಮೊತ್ತವನ್ನು ಕಲೆಹಾಕಲು ವಿಫಲವಾಗುವ ಮೂಲಕ ೧೮ ರನ್‌ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಇದರಿಂದ ಪಂಜಾಬ್ ಕಿಂಗ್ಸ್ ತಂಡ೧೮ ರನ್‌ಗಳಿಂದ ವಿಜಯ ಸಾಧಿಸಿತು.
ಮಂಗಳವಾರ ಚಂಡೀಗಡದ ಮೊಹಾಲಿಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ೩೯ ಎಸೆತಗಳಲ್ಲಿ ಶತಕ ಗಳಿಸಿದರು. ಇದರೊಂದಿಗೆ ಪ್ರಿಯಾಂಶ್ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಜಂಟಿ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಚೆನ್ನೈ ವಿರುದ್ಧ ಪ್ರಿಯಾಂಶ್ ಆರ್ಯ ಬ್ಯಾಟ್ ಅಬ್ಬರಿಸಿದರು. ಅವರು ಕೇವಲ ೩೯ ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಗಳಿಸಿದರು. ಇದು ಪ್ರಿಯಾಂಶ್ ಅವರ ಐಪಿಎಲ್‌ನಲ್ಲಿ ಮೊದಲ ಶತಕವಾಗಿದೆ. ಅವರು ೪೨ ಎಸೆತಗಳಲ್ಲಿ ೧೦೩ ರನ್ ಗಳಿಸಿ ಔಟಾದರು.

ಎಡಗೈ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಅವರೊಂದಿಗೆ ಆರನೇ ವಿಕೆಟ್‌ಗೆ ೭೧ ರನ್‌ಗಳ ಜೊತೆಯಾಟವಾಡಿದರು. ಉಳಿದಂತೆ ಮಾರ್ಕೋ ಜಾನ್ಸೆನ್ ೩೪ ರನ್ ಗಳಿಸಿದ್ದು ಹೊರತು ಪಡಿಸಿದರೆ ಬೇರೆ ಯಾವುದೇ ಆಟಗಾರರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲುವಲ್ಲಿ ವಿಫಲರಾದರು. ಇದರಿಂದ ಪಂಜಾಬ್ ಕಿಂಗ್ಸ್ ನಿಗದಿತ ೨೦ ಓವರ್ ಗಳಲ್ಲಿ ೨೧೯ ರನ್ ಗಳಿಸಿತು.

ಪಂಜಾಬ್ ಕಿಂಗ್ಸ್ ನೀಡಿದ ೨೨೦ ರನ್ ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ರಚಿನ್ ರವೀಂದ್ರ ೩೬, ಡೆವೊನ್ ಕಾನ್ವೇ ೬೯, ಶಿವಂ ದುಬೆ ೪೨, ಮಹೇಂದ್ರ ಸಿಂಗ್ ಧೋನಿ ೨೭ ರನ್ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಎರಡಂಕಿ ದಾಟಲಿಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ೨೦ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೨೦೧ ರನ್ ಗಳಿಸುವ ಮೂಲಕ ಮತ್ತೊಂದು ಸೋಲಿಗೆ ಶರಣಾಯಿತು.

Girl in a jacket
error: Content is protected !!