ನವದೆಹಲಿ,ಮೇ,೨೨:ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗ್ ಐಸಿಸಿ ಹಾಲ್ ಆಫ್ ಮೇಮಸ್‌ಗೆ ಆಯ್ಕೆಯಾಗಿರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಲೆಗ್ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಶ್ರೀಲಂಕಾಹಾಗೂ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಪ್ರಶಂಸಿದ್ದಾರೆ.
ಇತರ ದೇಶಗಳ ಅತ್ಯುತ್ತಮ ಆಟಗಾರರ ಸಾಧನೆಗಳನ್ನು ಆಚರಿಸಿದ ಬಳಿಕ, ಐಸಿಸಿಯು ಅನಿಲ್ ಕುಂಬ್ಳೆಯವರು ಕ್ರಿಕೆಟ್‌ನಲ್ಲಿ ಮಾಡಿರುವ ಅದ್ಭುತ ದಾಖಲೆಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ. ಅನಿಲ್ ಕುಂಬ್ಳೆ ಅವರನ್ನು, “ಸಾರ್ವಕಾಲಿಕ ಅತಿ ಶ್ರೇಷ್ಟ ಬೌಲರ್‌ಗಳಲ್ಲಿ ಒಬ್ಬರು” ಎಂದು ಕರೆದಿರುವ ಐಸಿಸಿ, ಅವರು ಕ್ರಿಕೆಟ್‌ನಲ್ಲಿ ಮಾಡಿರುವ ಎಲ್ಲಾ ಸಾಧನೆಗಳ ಪಟ್ಟಿಯನ್ನು ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ.
ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿ, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ, ಕುಮಾರ್ ಸಂಗಕ್ಕಾರ, ತಾನು ಅನಿಲ್ ಕುಂಬ್ಳೆ ಅವರ ಜೊತೆ ಕ್ರಿಕೆಟ್ ಆಡಿದ್ದ ದಿನಗಳ ಕೆಲವು ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಸಂಗಕ್ಕಾರ ವಿಡಿಯೋದಲ್ಲಿ ಕುಂಬ್ಳೆಯವರ ಆಟದ ಬಗ್ಗೆ ಮಾತನಾಡುತ್ತಾ, “ಒಬ್ಬ ಕಠಿಣ ಪ್ರತಿಸ್ಪರ್ಧಿ” ಎಂದು ಹೊಗಳಿದ್ದಾರೆ.
“ಕುಂಬ್ಳೆಯ ಕ್ರಿಕೆಟ್ ಚಾತುರ್ಯದ ದೆಸೆಯಿಂದ ನಾನು ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ” ಎಂದು ಅವರು ಹೇಳಿದ್ದಾರೆ.
ಕುಮಾರ್ ಸಂಗಕ್ಕಾರ ಅವರ ಪ್ರಕಾರ ಕುಂಬ್ಳೆ ಒಬ್ಬ ಸಾಂಪ್ರದಾಯಿಕ ಲೆಗ್ ಸ್ಪಿನ್ನರ್ ಅಲ್ಲ. “ ಈ ದೊಡ್ಡ, ಎತ್ತರದ ಅಜಾನುಬಾಹು ಬೌಲರ್, ವೇಗವಾಗಿ ಓಡಿಬಂದು ಬೌಲಿಂಗ್ ಮಾಡುವ ಪರಿಗೆ ಅವರನ್ನು ರನ್‌ಗಳಿಂದ ಅಷ್ಟು ಸುಲಭವಾಗಿ ದೂರವಿಡುವುದು ಸಾಧ್ಯವಿಲ್ಲ” ಎನ್ನುತ್ತಾರೆ ಸಂಗಕ್ಕಾರ.