ರಾಹುಲ್ ಅಬ್ಬರಕ್ಕೆ ಆರ್‌ಸಿಬಿ ತತ್ತರ- ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಸೋಲು
by-ಕೆಂಧೂಳಿ
ಬೆಂಗಳೂರು,ಏ,೧೧– ರಾಯಲ್ ಚಾಲೆಂಜರ್ಸ್‌ಬೆಂಗಳೂರು ವಿರುದ್ಧ ಕರ್ನಾಕದ ಹುಡುಗ ಕೆ.ಎಲ್.ರಾಹುಲ್ ಅಬ್ಬರಿಸಿದ ಪರಿಣಾಮ ಡೆಲ್ಲಿಕ್ಯಾಪಿಟಲ್ಸ್ ಅರ್‌ಸಿಬಿ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಸಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ಮೊದಲು ವಾಲಿಂಗ್ಸ್ ಆಯ್ಕೆ ಮಾಡಿಂಡಿತು, ಸ್ಪೋಟಕ ಆರಂಭ ಪಡೆದ ಆರ್‌ಸಿಬಿ ಫಿಲ್ ಸಾಲ್ಫ್‌ರೌನ್‌ಔಟ್ ಆಗುತ್ತಿದ್ದಂತೆ ಆಟಗಾರರ ಮೋರಿಯಲ್ಲಿ ದುಗುಡ ಆರಂಭವಾಗಿತ್ತು ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ ಬಿಗ್ ಬೌಲಿಂಗ್ ದಾಳಿ ಮಾಡುವ ಮೂಲಕ ರನ್‌ಗಳಗೆ ಕಡಿವಾಣ ಹಾಕಿತು.
ಇದರಿಂದ ಫಿಲ್ ಸಾಲ್ಟ್ ೧೭ ಎಸೆತಗಳಲ್ಲಿ ೪ ಬೌಂಡರಿ ೩ ಸಿಕ್ಸರ್ ಸಹಿತ ೩೭ ರನ್ ಗಳಿಸಿದರು, ಮಿಚೆಲ್ ಸ್ಟಾರ್ಕ್ ಅವರ ಒಂದೇ ಓವರ್ ನಲ್ಲಿ ೩೦ ರನ್ ಸಿಡಿಸಿ ಅಬ್ಬರಿಸಿದರು. ಆದರೆ ಅವರು ರನೌಟ್ ಆಗಿದ್ದೇ ಆರ್ ಸಿಬಿಗೆ ದೊಡ್ಡ ಹೊಡೆತವಾಯಿತು.
. ಕೊಹ್ಲಿ ೨೨ ರನ್ ಗಳಿಸಿ ಔಟಾದರೆ, ನಾಯಕ ರಜತ್ ಪಟಿದಾರ್ ೨೫ ರನ್ ಗಳಿಸಿ ಔಟಾದರು. ಲಿಯಾಮ್ ಲಿವಿಂಗ್‌ಸ್ಟೋನ್, ದೇವದತ್ ಪಡಿಕ್ಕಲ್ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಕೊನೆಯಲ್ಲಿ ಟಿಮ್ ಡೇವಿಡ್ ೨೦ ಎಸೆತಗಳಲ್ಲಿ ೨ ಬೌಂಡರಿ ೪ ಸಿಕ್ಸರ್ ಸಹಿತ ಅಜೇಯ ೩೭ ರನ್ ಗಳಿಸುವ ಮೂಲಕ ಆರ್ ಸಿಬಿ ೧೬೩ ರನ್ ಕಲೆಹಾಕಲು ಪ್ರಮುಖ ಕೊಡುಗೆ ನೀಡಿದರು.
೧೬೪ ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರ್ ಸಿಬಿ ಬೌಲರ್ ಗಳು ಆರಂಭದಲ್ಲೇ ಆಘಾತ ನೀಡಿದರು. ಫಾಫ್ ಡುಪ್ಲೆಸಿಸ್ ೨ ರನ್ ಗಳಿಸಿ ಔಟಾದರೆ, ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಅಭಿಷೇಕ್ ಪೊರೆಲ್ ತಲಾ ೭ ರನ್ ಗಳಿಸಿ ಔಟಾದರು. ಆದರೆ ಕೆಎಲ್ ರಾಹುಲ್ ಮತ್ತೊಂದು ಕಡೆ ವಿಕೆಟ್ ಬೀಳದಂತೆ ಎಚ್ಚರಿಕೆಯಿಂದ ಆಡಿದರು. ಅಕ್ಷರ್ ಪಟೇಲ್ ೧೫ ರನ್ ಗಳಿಸಿ ಔಟಾದರು.
ಟ್ರಿಸ್ಟಾನ್ ಸ್ಟಬ್ಸ್ ೨೩ ಎಸೆತಗಳಲ್ಲಿ ಅಜೇಯ ೩೮ ರನ್ ಗಳಿಸಿದರು. ಕೆಎಲ್ ರಾಹುಲ್ ೫೩ ಎಸೆತಗಳಲ್ಲಿ ೭ ಬೌಂಡರಿ ೬ ಸಿಕ್ಸರ್ ಸಹಿತ ಅಜೇಯ ೯೩ ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟರು. ಭುವನೇಶ್ವರ್ ಕುಮಾರ್ ೨ ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಸುಯಾಶ್ ಶರ್ಮಾ ತಲಾ ೧ ವಿಕೆಟ್ ಪಡೆದರು.
ಆರ್ ಸಿಬಿ ಹೊರಗಡೆ ಮೂರು ಪಂದ್ಯಗಳನ್ನು ಗೆದ್ದಿದ್ದು ತವರಿನಲ್ಲಿ ಆಡಿದ ೨ ಪಂದ್ಯಗಳನ್ನು ಸೋತಿದೆ. ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು ಏಪ್ರಿಲ್ ೧೩ ರಂದು ಜೈಪುರದಲ್ಲಿ ಈ ಪಂದ್ಯ ನಡೆಯಲಿದೆ.