ಚೆನೈ ಸೂಪರ್‌ಕಿಂಗ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ
ಕೆಂಧೂಳಿ
ಚೆನೈ,ಏ,೧೧-ಚೆನೈ ಸೂಪರ್ ಕಿಂಗ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮತ್ತೊಮ್ಮೆ ಸೋಲುವ ಮೂಲಕ ಸತತ ಐದು ಪಂದ್ಯಗಳನ್ನುಸೋತು ದಾಖಲೆ ಬರೆದಿದೆ.
ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆಮಾಡಿಕೊಂಡಿತು,ಮೊದಲು ಬ್ಯಾಟಿಂಗ್ ಮಾಡಿದ ಚೆನೈ ಸೂಪರ್ ಕಿಂಗ್ಸ್ ನಿಗಧಿತ ೨೦ಓವರ್‌ಗಳಲ್ಲಿ ೧೦೩ರನ್ ಮಾತ್ರ ಪೇರಿಸಲು ಸಾಧ್ಯವಾಯಿತು.ಶಿವಂ ದುಬೆ ಅಜೇಯ ೩೧ ರನ್ ಗಳಿಸಿದರೆ, ವಿಜಯ್ ಶಂಕರ್ ೨೯ ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಗಳು ಕೂಡ ಜಾಸ್ತಿ ಹೊತ್ತು ನಿಲ್ಲಲಿಲ್ಲ. ಂಟso ಖeಚಿಜ “ಅSಏ vs ಏಏಖ: ಧೋನಿ ನಾಯಕತ್ವದಲ್ಲಿ ಕೆಟ್ಟ ದಾಖಲೆ ಬರೆದ ಸಿಎಸ್‌ಕೆ” ಸುನಿಲ್ ನರೈನ್ ಮಾರಕ ಬೌಲಿಂಗ್ ಮಾಡಿದರು. ೪ ಓವರ್ ಗಳಲ್ಲಿ ೧೩ ರನ್ ಮಾತ್ರ ಬಿಟ್ಟುಕೊಟ್ಟು ೩ ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಲಾ ೨ ವಿಕೆಟ್ ಪಡೆದರು. ವೈಭವ್ ಅರೋರಾ ಮತ್ತು ಮೋಯಿನ್ ಅಲಿ ತಲಾ ೧ ವಿಕೆಟ್ ಪಡೆದರು. ಭರ್ಜರಿ ಗೆಲುವು ಪಡೆದ ಕೆಕೆಆರ್ ೧೦೪ ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಸಿಎಸ್‌ಕೆ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಕ್ವಿಂಟನ್ ಡಿ ಕಾಕ್ ೧೬ ಎಸೆತಗಳಲ್ಲಿ ೨೩ ರನ್ ಗಳಿಸಿದರೆ, ಸುನಿಲ್ ನರೈನ್ ೧೮ ಎಸೆತಗಳಲ್ಲಿ ೪೪ ರನ್ ಗಳಿಸಿದರು. ಅಜಿಂಕ್ಯ ರಹಾನೆ ಅಜೇಯ ೨೦ ರನ್ ಗಳಿಸಿದರೆ, ರಿಂಕು ಸಿಂಗ್ ಅಜೇಯ ೧೫ ರನ್ ಗಳಿಸಿದರು. ಈ ಗೆಲುವಿನ ಮೂಲಕ ರನ್‌ರೇಟ್‌ನಲ್ಲಿ ಭಾರಿ ಸುಧಾರಣೆಯಾಗಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.
ಕೆಕೆಆರ್ ಇನ್ನೂ ೫೯ ಬಾಲ್‌ಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಸಿಎಸ್‌ಕೆ ಮೊದಲ ಬಾರಿಗೆ ಸತತ ಐದು ಸೋಲುಗಳನ್ನು ಕಂಡಿದೆ. ತವರಿನಲ್ಲಿ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಪಂದ್ಯಗಳನ್ನು ಸೋತ ಕೆಟ್ಟ ದಾಖಲೆ ಮಾಡಿದೆ. ಎಂಎಸ್ ಧೋನಿ ನಾಯಕನಾಗಿ ವಾಪಸಾತಿ ಮಾಡಿದರೂ ತಂಡವನ್ನು ಗೆಲುವಿನ ಕಡೆಗೆ ಮುನ್ನಡೆಸಲು ಆಗಲಿಲ್ಲ. ತಂಡದ ಆಟಗಾರರು ಆಡಿದ ರೀತಿಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.