ಕೊಯ್ಲಿ -ಪಾಂಡ್ಯೆ ಭರ್ಜರಿ ಆಟದಿಂದ ಐಪಿಎಲ್ ಮೊದಲ ಜಯಗಳಿಸಿದ ಆರ್‌ಸಿಬಿ

Share

ಕೊಯ್ಲಿ -ಪಾಂಡ್ಯೆ ಭರ್ಜರಿ ಆಟದಿಂದ ಐಪಿಎಲ್ ಮೊದಲ ಜಯಗಳಿಸಿದ ಆರ್‌ಸಿಬಿ

by-ಕೆಂಧೂಳಿ

ಕೋಲ್ಕತಾ,ಮಾ,೨೩-ಐಪಿಎಲ್ ಮೊದಲ ಪಂದ್ಯದಲ್ಲೇ ಆ ಮೋಡಿ ಆಟ ನೆರದವರನ್ನೆಲ್ಲ ಹುಚ್ಚೆಬ್ಬಿಸಿ ಕುಣಿಯಲು ಕಾರಣವಾಯಿತು.ಹೌದು ವಿರಾಟ್ ಕೊಯ್ಲಿ ಮತ್ತು ಪಾಂಡ್ಯ ಉತ್ತಮ ಆಟದಿಂದ ಕೋಲ್ಕತ್ತಾನೈಟ್‌ರೈಡರ್ಸ್ ತಂಡವನ್ನು ಏಳು ವಿಕೆಟ್‌ಗಳ ಅಂತರಿಂದ ರಾಯಲ್ ಚಾಲೆಂರ್ಸ್ ತಂಡ ಮಣಿಸುವ ಮೂಲಕ ಮೊದಲ ಗೆಲುವಿನ ಹೆಜ್ಜೆ ಇಟ್ಟರು.

‘ಚೇಸಿಂಗ್ ಕಿಂಗ್’ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಆಲ್ ರೌಂಡರ್ ಕೃನಾಲ್ ಪಾಂಡ್ಯ(೩-೨೯) ನೇತೃತ್ವದ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ೭ ವಿಕೆಟ್ ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೮ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಶನಿವಾರ ಗೆಲ್ಲಲು ೧೭೫ ರನ್ ಗುರಿ ಬೆನ್ನಟ್ಟಿದ ಆರ್ ಸಿ ಬಿ ತಂಡವು ೧೬.೨ ಓವರ್ ಗಳಲ್ಲಿ ೩ ವಿಕೆಟ್ ಗಳ ನಷ್ಟಕ್ಕೆ ೧೭೭ ರನ್ ಗಳಿಸಿತು. ಕೊಹ್ಲಿ ಔಟಾಗದೆ ೫೯ ರನ್(೩೬ ಎಸೆತ, ೪ ಬೌಂಡರಿ, ೩ ಸಿಕ್ಸರ್)ಹಾಗೂ ಲಿವಿಂಗ್ ಸ್ಟೋನ್(ಔಟಾಗದೆ ೧೫)ಇನ್ನೂ ೨೨ ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.

ಫಿಲ್ ಸಾಲ್ಟ್ ಜೊತೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಮೊದಲ ವಿಕೆಟ್ ನಲ್ಲಿ ೮.೩ ಓವರ್ ಗಳಲ್ಲಿ ೯೫ ರನ್ ಜೊತೆಯಾಟ ನಡೆಸಿ ರನ್ ಚೇಸ್ ಗೆ ಭದ್ರ ಬುನಾದಿ ಹಾಕಿಕೊಟ್ಟರು. ಸಾಲ್ಟ್ ಔಟಾದ ಸ್ವಲ್ಪ ಹೊತ್ತಿನಲ್ಲಿ ದೇವದತ್ತ ಪಡಿಕ್ಕಲ್(೧೦ ರನ್)ವಿಕೆಟ್ ಒಪ್ಪಿಸಿದರು. ಕೊಹ್ಲಿ ಜೊತೆಗೆ ೩ನೆ ವಿಕೆಟ್ಗೆ ೪೪ ರನ್ ಸೇರಿಸಿದ ನಾಯಕ ರಜತ್ ಪಾಟಿದಾರ್ ೩೪ ರನ್ ಗಳಿಸಿದರು.
ಹರ್ಷಿತ್ ರಾಣಾ ಎಸೆತವನ್ನು ಬೌಂಡರಿಗೆ ಅಟ್ಟಿದ ಕೊಹ್ಲಿ ಕೇವಲ ೩೦ ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಕೊಹ್ಲಿ ಮೈಲಿಗಲ್ಲು ತಲುಪಿದ ನಂತರ ಮೈದಾನಕ್ಕೆ ನುಸುಳಿದ ಕ್ರಿಕೆಟ್ ಅಭಿಮಾನಿಯೊಬ್ಬ ಕೊಹ್ಲಿ ಕಾಲಿಗೆ ಎರಗಿದ್ದಾನೆ.

ಇದೇ ವೇಳೆ ಐಪಿಎಲ್ ನಲ್ಲಿ ಕೆಕೆಆರ್ ವಿರುದ್ಧ ಕೊಹ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದರು. ಡೇವಿಡ್ ವಾರ್ನರ್(೧೦೯೩ ರನ್)ಹಾಗೂ ರೋಹಿತ್ ಶರ್ಮಾ(೧೦೭೦ ರನ್) ಈ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಪರ ನಾಯಕ ಅಜಿಂಕ್ಯ ರಹಾನೆ (೫೬ ರನ್, ೩೧ ಎಸೆತ, ೬ ಬೌಂಡರಿ, ೪ ಸಿಕ್ಸರ್) ಹಾಗೂ ಸುನೀಲ್ ನರೇನ್(೪೪ ರನ್, ೨೬ ಎಸೆತ, ೫ ಬೌಂಡರಿ, ೩ ಸಿಕ್ಸರ್) ೨ನೇ ವಿಕೆಟ್ ನಲ್ಲಿ ೧೦೩ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದ್ದರೂ ಆರ್ ಸಿ ಬಿ ಬೌಲರ್ ಗಳು ಶಿಸ್ತುಬದ್ದ ಬೌಲಿಂಗ್ ದಾಳಿ ಸಂಘಟಿಸಿ ನಿಗದಿತ ೨೦ ಓವರ್ ಗಳಲ್ಲಿ ೮ ವಿಕೆಟ್ ಗಳ ನಷ್ಟಕ್ಕೆ ೧೭೪ ರನ್ ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಮೊದಲ ೧೦ ಓವರ್ ಗಳಲ್ಲಿ ೧೦೭ ರನ್ ಬಿಟ್ಟುಕೊಟ್ಟಿದ್ದ ಆರ್ ಸಿ ಬಿ ಆ ನಂತರ ಮರು ಹೋರಾಟವನ್ನು ನೀಡಿತು. ೪ ಓವರ್ ಗಳಲ್ಲಿ ೨೨ ರನ್ ಗೆ ೨ ವಿಕೆಟ್ ಪಡೆದಿರುವ ಜೋಶ್ ಹೇಝಲ್ ವುಡ್ ಕೊನೆಯ ಓವರ್ನಲ್ಲಿ ಕೇವಲ ೫ ರನ್ ನೀಡಿ ಒಂದು ವಿಕೆಟ್ ಉರುಳಿಸಿದರು.

ದ್ವಿತೀಯಾರ್ಧದಲ್ಲಿ ಕೆಕೆಆರ್ ತಂಡವು ನಿರಂತರವಾಗಿ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿದ್ದು, ಕೃನಾಲ್ ಪಾಂಡ್ಯ(೩-೨೯) ಅವರು ರಹಾನೆ(೫೬ ರನ್), ವೆಂಕಟೇಶ್ ಅಯ್ಯರ್(೬ ರನ್)ಹಾಗೂ ರಿಂಕು ಸಿಂಗ್(೧೨ ರನ್)ವಿಕೆಟ್ ಗಳನ್ನು ಉರುಳಿಸಿ ಕೆಕೆಆರ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಕೆಕೆಆರ್ನ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(೪ ರನ್),ಆಂಡ್ರೆ ರಸೆಲ್(೪ ರನ್), ರಮಣ್ ದೀಪ್ ಸಿಂಗ್(೬), ಹರ್ಷಿತ್ ರಾಣಾ(೫ ರನ್)ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ರಘುವಂಶಿ ೩೦ ರನ್ ಕೊಡುಗೆ ನೀಡಿದರು.
ಆರ್ ಸಿ ಬಿ ಪರ ಪಾಂಡ್ಯ ಯಶಸ್ವಿ ಪ್ರದರ್ಶನ ನೀಡಿದರೆ, ಜೋಶ್ ಹೇಝಲ್ ವುಡ್(೨-೨೨) ೨ ವಿಕೆಟ್ ಪಡೆದರು. ಯಶ್ ದಯಾಳ್(೧-೨೫), ರಸಿಕ್ ಸಲಾಮ್(೧-೩೫)ಹಾಗೂ ಸುಯಶ್ ಶರ್ಮಾ(೧-೪೭)ತಲಾ ಒಂದು ವಿಕೆಟ್ ಪಡೆದರು.

Girl in a jacket
error: Content is protected !!