ಆರಂಭದ ಪಂದ್ಯೆದಲ್ಲೇ ಎನ್‌ಸಿಕ್ಲಾಸಿಕ್ ಗೆದ್ದ ಚೋಪ್ರಾ

Share

ಬೆಂಗಳೂರು,ಜು,೦೫-ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಉದ್ಟಾಟನಾ ಟೂರ್ನಿಯಲ್ಲೇ ವಿಶ್ವಚಾಂಪಿಯನ್ ನೀರಜ್ ಚೋಪ್ರಾ ಎನ್‌ಸಿ ಕ್ಲಾಸಿಕ್ ಅನ್ನು ಗೆಲ್ಲುವ ಮೂಲಕ ತಮ್ಮ ವಿಶ್ವದರ್ಜೆಯ ಈವೆಂಟ್ ಅನ್ನು ಆಯೋಜಿಸುವ ಕನಸನ್ನು ನನಸಾಗಿಸಿದರು.

೨೭ ವರ್ಷದ ಡಬಲ್ ಒಲಿಂಪಿಕ್ ಪದಕ ವಿಜೇತರು ತಮ್ಮ ಪೋಷಕರ ಸಮ್ಮುಖದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ೮೬.೧೮ ಮೀಟರ್ ದೂರ ಎಸೆಯುವ ಮೂಲಕ ವಿಜೇತರಾಗಿದ್ದಾರೆ.
ಪ್ಯಾರಿಸ್ ಡೈಮಂಡ್ ಲೀಗ್ (ಜೂನ್ ೨೦) ಮತ್ತು ಪೋಲೆಂಡ್‌ನ ಒಸ್ಟ್ರಾವಾದಲ್ಲಿ (ಜೂನ್ ೨೪) ಗೋಲ್ಡನ್ ಸ್ಪೈಕ್ ನ್ನು ಗೆದ್ದ ನಂತರ ಇದು ಅವರ ಸತತ ಮೂರನೇ ಪ್ರಶಸ್ತಿಯಾಗಿದೆ.

ಕೀನ್ಯಾದ ೨೦೨೫ ರ ವಿಶ್ವ ಚಾಂಪಿಯನ್ ಜೂಲಿಯಸ್ ಯೆಗೊ ೮೪.೫೧ ಮೀ ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ರುಮೇಶ್ ಪತಿರಾಜ್ (೮೪.೩೪ ಮೀ) ಮೂರನೇ ಸ್ಥಾನದಲ್ಲಿದ್ದಾರೆ.
ಬಹುತೇಕ ನೇರವಾಗಿ ಬೀಸುತ್ತಿದ್ದ ಬಲವಾದ ಗಾಳಿಯ ಅಡಿಯಲ್ಲಿ ಎಸೆಯಬೇಕಾಗಿರುವುದರಿಂದ ಎಲ್ಲಾ ಸ್ಪರ್ಧಿಗಳಿಗೆ ಇದು ಕಠಿಣ ಸವಾಲಾಗಿತ್ತು ಆರಂಭದಲ್ಲಿ ಫೌಲ್ ಆದ ಚೋಪ್ರಾ ತಮ್ಮ ಎರಡನೇ ಪ್ರಯತ್ನದಲ್ಲಿ ೮೨.೯೯ ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನ ನಂತರ ಎರಡನೇ ಸ್ಥಾನ ಪಡೆದಿದ್ದ ಶ್ರೀಲಂಕಾದ ಪತಿರಾಜ್, ತಮ್ಮ ಮೂರನೇ ಪ್ರಯತ್ನದಲ್ಲಿ ೮೪.೩೪ ಮೀಟರ್ ದೂರ ಎಸೆದರು.

Girl in a jacket
error: Content is protected !!