ಚಿತ್ರದುರ್ಗ, ಜ,28;ಚಿತ್ರದುರ್ಗದಲ್ಲಿ 29 ಪೆಬ್ರವರಿ ಯಂದು ಎರಡು ಪ್ರಮುಖ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು
ಒಂದು-
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ರಾಯಚೂರು ನ್ಯಾಯಾಧೀಶರೊಬ್ಬರು ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ,ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು
ನೃೆತಿಕತೆಯೂ ಕೂಡ ನಾನೂ ಭಾಗವಹಿಸಿ ಭಾರತದ ಸಂವಿಧಾನಕ್ಕೆ ,ಪ್ರಜಾಪ್ರಭುತ್ವಕ್ಕೆ ಗೌರವಿಸುವುದು ಜವಾಬ್ದಾರಿಯೂ ಹೌದು.
ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಅವರು ನೀಡಿದ ಸಂವಿಧಾನವು ಈ ದೇಶವನ್ನು ರಕ್ಷಣೆ ನೀಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ಆ ಕಾರಣಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ.
ಶ್ರೀ ಬಸವ ನಾಗಿದೇವ ಶರಣರು,ಛಲವಾದಿ ಮಹಾಮಠ,ಚಿತ್ರದುರ್ಗ,ದಲಿತ ಹೋರಾಟಗಾರರಾದ ಹನುಮಂತಪ್ಪ ದುರ್ಗ,ದೇವರಾಜ್,ಕಣಿವೆ
ಮಾರಮ್ಮ ತಿಪ್ಪೇಸ್ವಾಮಿ ,ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.
ನ್ಯಾಯಾಧೀಶರು ಪ್ರಜ್ಞಾ ಪೂರಕನೋ ಪ್ರೇರಣೆಯಿಂದಲೋ ಸಂವಿಧಾನಕ್ಕೆ ಮತ್ತು ಅಂಬೇಡ್ಕರ್ ಗೆ ಅವಮಾನ ಮಾಡಿಯಾಗಿತ್ತು ಇದನ್ನು ವಿರೋಧಿಸೋದು ಈ ದೇಶದ ಜನತೆಯ ಕರ್ತವ್ಯ ಕೂಡ !
ಎರಡನೇ……..?
ಅಲೆಮಾರಿ ಸುಡುಗಾಡ ಸಿದ್ಧ ಜನಾಂಗದವರಿಗೆ….ಶಾಶ್ವತ ಸೂರು ಕೊಡುವ ಕಾರ್ಯಕ್ರಮ ಇತ್ತು.ಅದೇಕೋ ಮುಂದೂಡಲ್ಪಟ್ಟಿತ್ತು. ಕಾರಣ ತಿಳಿಲಿಲ್ಲ. ಹಾಗೆಯೇ ಸಚಿವರು ಕೇಳಿ ಜವಾಬ್ದಾರಿ ಮೆರೆದರು !
ಬೆಂಗಳೂರನಿಂದ ಬಯಲು ಸೀಮೆ ಪ್ರಾದೇಶಾಭಿವೃದ್ಧಿ ಮಂಡಳಿ ಸಚಿವರಾದ ಮುನಿರತ್ನ,ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ,ಎಂಎಲ್ಸಿ.ಕೆ.ಎಸ್.ನವೀನ್, ಹಿರಿಯೂರು ಶಾಸಕಿ ಶ್ರೀಮತಿ ಪೂರ್ಣಿಮಾ ಜಿಲ್ಲಾಧಿಕಾರಿ ಕವಿತಾ ಮನ್ನಕೇರಿ
ಬಯಲು ಸೀಮೆ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿ,ಅಧಿಕಾರಿಗಳು ಅಲೆಮಾರಿ ಸಂಘಟನೆ ಪದಾಧಿಕಾರಿಗಳು,ವಿಮುಕ್ತಿ ವಿದ್ಯಾ ಸಂಸ್ಥೆಶಂಯೋಜಕ ಟಿ.ಕುಮಾರ್ ,ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ,ಸುಡುಗಾಡ ಸಿದ್ಧರ ಸಂಘಟನೆಯ ನಾಗರಾಜ್ ,ಜಯಣ್ಣ,ಕೃಷ್ಣಪ್ಪ ,ಸಿಳ್ಳೆಕ್ಯಾತರ್ ಕೃಷ್ಣಪ್ಪ .ಬುಡ್ಗ ಜಂಗಮ ಗುರುಮೂರ್ತಿ.ಹೀಗೆ ಅಧಿಕಾರಿಗಳು,ರಾಜಕಾರಣಿಗಳು,ಹೋರಾಟಗಾರರು ವಿಶೇಷವಾಗಿ ಸುಡುಗಾಡ ಸಿದ್ಧರು ತಮ್ಮ ಜೀವನೋಪಾಯದ ವೇಷಭೂಷಣದಲ್ಲಿ ಬಂದು ಸಚಿವರಿಗೆ ಮನವಿ ಮಾಡಿಕೊಂಡಿದ್ದು ವಿಶೇಷವಾಗಿತ್ತು.