ಎಸ್ ಎಪಿ ಕಾಯ್ದೆಯಡಿ ಕಬ್ಬಿನ ಬೆಲೆ ನಿಗದಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ: ಬಸವರಾಜ ಬೊಮ್ಮಾಯಿ

Share

ಬೆಂಗಳೂರು,ನ,08-: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಲು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ ಎಪಿ ಕಾನೂನು ಮಾಡಲಾಗಿದ್ದು, ಆ ಕಾನೂನಿನಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣವಾದ ಅಧಿಕಾರ ಇದೆ. ಇದನ್ನು ರಾಜ್ಯ ಸರ್ಕಾರ ಇದುವರೆಗೂ ಬಳಕೆ ಮಾಡಿಲ್ಲ. ಸಿಎಂ ಇದನ್ನು ಬಳಕೆ ಮಾಡಿ ರೈತರಿಗೆ ನ್ಯಾಯ ಕೊಟ್ಟರೆ ಕಬ್ಬಿನ ಸಮಸ್ಯೆಗೆ ನ್ಯಾಯ ಸಮ್ಮತ ಪರಿಹಾರ ಕೊಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ‌.

ಈ ಕುರಿತು ಎಕ್ಸ್ ಮಾಡಿರುವ ಅವರು, ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಲು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ ಎಪಿ ಕಾನೂನು ಮಾಡಲಾಗಿದ್ದು, ಆ ಕಾನೂನಿನಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣವಾದ ಅಧಿಕಾರ ಇದೆ. ಹಾಗೂ ಯಾವ ಸೂತ್ರದಡಿ ದರ ನಿಗದಿ ಮಾಡಬೇಕು ಎನ್ನುವುದು ಇದೆ. ಕಬ್ಬು ಬೆಳೆಯಲು, ಸಕ್ಕರೆ ತಯಾರಿಕೆ, ಉಪ ಪದಾರ್ಥ ತಯಾರಿಕೆಗೆ ಬೀಳುವ ಹೊರೆ ಎಷ್ಟು ಹಾಗೂ ಮಾರುಕಟ್ಟೆಯ ದರ ಎಷ್ಟು ಒಟ್ಟು ಲಾಭದಲ್ಲಿ ರೈತರ ಪಾಲು ಕಾರ್ಖಾನೆ ಮಾಲೀಕರ ಪಾಲು ನಿಗದಿ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ. ಇದನ್ನು ರಾಜ್ಯ ಸರ್ಕಾರ ಇದುವರೆಗೂ ಬಳಕೆ ಮಾಡಿಲ್ಲ. ಸಿಎಂ ಇದನ್ನು ಬಳಕೆ ಮಾಡಿ ರೈತರಿಗೆ ನ್ಯಾಯ ಕೊಟ್ಟರೆ ಈ ಸಮಸ್ಯೆಗೆ ನ್ಯಾಯ ಸಮ್ಮತ ಪರಿಹಾರ ಕೊಡಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ‌.

ಬೆಳಗಾವಿ ಜಿಲ್ಲಾಧಿಕಾರಿಯವರು ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 2900 ರೂ ಇದ್ದಿದ್ದನ್ನು 3200 ರೂ. ವರೆಗೂ ಹೆಚ್ಚಿಗೆ ಮಾಡಿ ರೈತರ ಪ್ರೀತಿಗೆ ಪಾತ್ರರಾಗಿದ್ದಾರೆ.
ನಮ್ಮ ರಾಜ್ಯದ ಘನವೆತ್ತ ಮುಖ್ಯಮಂತ್ರಿ ಬಹಳ ದೊಡ್ಡ ಪ್ರಯಾಸ ಪಟ್ಟು ಇಡೀ ದಿನ ಸಭೆ ನಡೆಸಿ 3200 ರಿಂದ ಕಾರ್ಖಾನೆಗಳಿಗೆ 50 ರೂ. ಹೆಚ್ಚಿಸುವ ಪ್ರಸ್ತಾವನೆಯನ್ನು ಕೊಟ್ಟಿದ್ದಾರೆ. ಅದನ್ನು ಕೆಲವರು ಒಪ್ಪಿದ್ದಾರೆ ಕೆಲವರು ಒಪ್ಪಿಲ್ಲ. ಒಬ್ಬ ಅಧಿಕಾರಿ ಮಾಡಿರುವ ಸಾಧನೆ ರಾಜ್ಯದ ಮುಖ್ಯಸ್ಥರಾಗಿ ಮಾಡಲು ಸಾಧ್ಯವಾಗದ ಅಂದರೆ ರಾಜ್ಯದ ಮುಖ್ಯಮಂತ್ರಿಗಳ ವಿಶ್ವಾಸಾರ್ಹತೆಯ ಪ್ರಶ್ನೆ ಮೂಡಿಸುತ್ತದೆ. ಆದಾಗ್ಯೂ ತಡವಾಗಿಯಾದರೂ ಈ ಪ್ರಯತ್ನ ಮಾಡಿದ್ದಕ್ಕಾಗಿ ಸರ್ಕಾರದಿಂದ 50 ರೂ. ಕೊಡುವ ತೀರ್ಮಾನ ಮಾಡಿರುವುದು ಒಂದು ಸಕಾರಾತ್ಮಕ ಬೆಳವಣಿಗೆ ಎಂದು ತಿಳಿಸಿದ್ದಾರೆ.

ನಾನು ಈ ಮೊದಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಸಕ್ಕರೆ ಕಾರ್ಖಾನೆ ಉತ್ಪಾದನೆ ಮಾಡುವ ವಿದ್ಯುತ್ತಿಗೆ ಪಿಪಿಎ ಮಾಡಿಕೊಂಡು ಪ್ರತಿ ಯುನಿಟ್ ಗೆ 5.5 ರೂ ಕೊಟ್ಟು ಒಪ್ಪಂದ ಮಾಡಿಕೊಳ್ಳಲು ಆಗ್ರಹ ಮಾಡಿದ್ದು ಸ್ಮರಿಸುತ್ತೇನೆ. ಸಕ್ಕರೆ ವಾಣಿಜ್ಯ ಬೆಳೆ . ಸಕ್ಕರೆ ಪ್ರತಿನಿತ್ಯ ಉಪಯೋಗಿಸುವ ವಸ್ತು. ಹೀಗಾಗಿ ಕೇಂದ್ರ ಸರ್ಕಾರ ಸಕ್ಕರೆ ಮತ್ತು ಅದರ ಉಪ ಉತ್ಪನ್ನಗಳ ಮೊತ್ತವನ್ನು ತಿರ್ಮಾನ ಮಾಡುವಾಗ ಸಮತೋಲನದ ನಿರ್ಧಾರ ಮಾಡಬೇಕಾಗುತ್ತದೆ ಜನಸಾಮಾನ್ಯರಿಗೆ ಹೊರೆಯಾಗದಂತೆ ರೈತರಿಗೆ ಹೆಚ್ಚಿಗೆ ದರ ಕೊಡುವ ಕೆಲಸ ಮಾಡುತ್ತದೆ. ಆದ್ದರಿಂದ ಎಲ್ಲದಕ್ಕೂ ಕೇಂದ್ರವನ್ನು ಹೊಣೆ ಮಾಡುವಂತದ್ದು ಅಷ್ಟು ಸಮಂಜಸ ಅಲ್ಲ. ನಮ್ಮ ರಾಜ್ಯದ ರೈತರ ಹಿತ ಕಾಯುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ತಿಳಿಸಿದ್ದಾರೆ.

Girl in a jacket
error: Content is protected !!